ಹನಿ ನೀರಾವರಿಯ ಪ್ರಯೋಜನ by RFIS-ADVISORIES published on 2022-08-13T08:29:19Z ನಮಸ್ಕಾರ, ಸಹೋದರ ಸಹೋದರಿಯರೇ, ರಿಲಯನ್ಸ್ ಫೌಂಡೇಶನ್ ಪರವಾಗಿ , ನಿಮಗೆ 75 ನೇ ವರ್ಷದ "ಸ್ವಾತಂತ್ರ್ಯ ಅಮೃತ ಮಹೋತ್ಸವ" ದಿನಾಚರಣೆಯ ಶುಭಾಶಯಗಳು. ಬೆಳೆಗಳಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸುವುದರಿಂದ 40 ರಿಂದ 60 ಪ್ರತಿಶತದಷ್ಟು ನೀರನ್ನು ಉಳಿಸಬಹುದು. ನೀರು ನೇರವಾಗಿ ಸಸ್ಯದ ಬೇರು ಪ್ರದೇಶದ ಮೇಲೆ ಹನಿಯುವುದರಿಂದ, ನೀರಿನ ಸದ್ಬಳಕೆ ಮಾಡಬಹುದು.ಪ್ರತಿದಿನ ನೀರು ಕೊಡುವುದರಿಂದ ಗಾಳಿ, ಶಾಖ ಮತ್ತು ತೇವಾಂಶದ ಪರಿಪೂರ್ಣ ಸಮತೋಲನವನ್ನು ಸೃಷ್ಟಿಸುತ್ತದೆ, ಸಸ್ಯದ ಬೇರುಗಳು ಹೆಚ್ಚು ಹೆಚ್ಚು ಸಕ್ರಿಯವಾಗಿರುತ್ತವೆ. ಇದರ ಪರಿಣಾಮವಾಗಿ, ಬೆಳವಣಿಗೆ ಮತ್ತು ಅಭಿವೃದ್ಧಿಯು ವೇಗಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗಾಗಿ, ನೀವು ರಿಲಯನ್ಸ್ ಫೌಂಡೇಶನ್ನ ಉಚಿತ ಸಹಾಯವಾಣಿ 1800-419-8800 ಅನ್ನು ಸಂಪರ್ಕಿಸಬಹುದು, ಧನ್ಯವಾದಗಳು.